ವೃದ್ದಾಪ್ಯ ಸ್ವರ್ಗಕ್ಕೆ ೧,೨,೩ ಮೆಟ್ಟಿಲು / OLD AGE 1,2,3 STEPS FOR HEAVEN
ವೃದ್ದಾಪ್ಯ ಹುಟ್ಟಿನಿಂದ ಸಾವಿನೆಡೆಗಿನ ಪಯಣದ ಕೊನೇ ಕ್ಷಣಗಳು.
ಹುಟ್ಟಿನಿಂದ ಪ್ರಾರಂಭವಾದ ಮನುಷ್ಯ ಜೀವನದ ವೈಭೋಗ, ಮಮತೆ, “ಚಿ ಹಚಿ ಕಳ್ಳಾ” ಎಂಬ ಲಾಲನೆ ಪಾಲನೆ ಎಲ್ಲವೂ ಸಮಾಜದ ಖುಷಿ ಕ್ಷಣಗಳೇ ವಿನಹಃ ಪ್ರತಿಯೊಬ್ಬರ ಹುಟ್ಟು ಅಳುವಿನಿಂದಲೇ ಪ್ರಾರಂಭವಾಗುತ್ತದೆ, ಹುಟ್ಟಿನಿಂದ ಪ್ರಾರಂಭವಾದ ಈ ಅಳು ಕೊನೆಗೆ ತಾನು ಸತ್ತಾಗ, ಮೊದಲು ನಕ್ಕ ಅದೇ ಸಮಾಜವನ್ನು ಅಳಿಸುತ್ತದೇ, ಆದರೆ ಆಗಲೂ ಸಹ ಸಮಾಜವು ಹೂವಿನ ಅಲಂಕಾರ, ವಾದ್ಯಗಳೊಂದಿಗೆ, ಪೂಜೆ ತಿಥಿಗಳೊಂದಿಗೆ ವೈಭೋಗವಾಗಿ ಕಳುಹಿಸಿಕೊಡುತ್ತಾರೆ. ಆದರೆ ನಮ್ಮೆಲ್ಲರಲ್ಲೂ ಕಾಡುವುದೊಂದೇ ಸತ್ತಾಗ ಸಿಕ್ಕ ಈ ವೈಭೋಗ ತಮ್ಮ ಸಾಯುವ ಕೊನೇ ದಿನಗಳಲ್ಲಿ ಅಥವಾ ಅವರ ಬದುಕಿದ್ದ ಅಷ್ಟು ದಿನಗಳಲ್ಲಿ ಅನುಭವಿಸಿದ್ದಾರೆಯೇ ಎಂಬುದು?.
ಪ್ರತಿಯಬ್ಬರು ಹುಟ್ಟಿದ ಮೇಲೆ ಸಾಯುತ್ತಾರೆ ಆದರೆ ಸಾವಿಗೆ ಸ್ವಲ್ಪ ದ್ವೇಷಿಗಳಾದವರು ಸ್ವಲ್ಪ ನಿಧಾನವಾಗಿ ವೃದ್ದಾಪ್ಯದ ಅನುಭವಗಳನ್ನು ಪಡೆದು ಸಾಯುತ್ತಾರೆ.
ಅಜ್ಜಿ ತಾತಂದಿರ ಜೊತೆಗೆ ಬೆಳೆಯಲು ವiಕ್ಕಳು ಹೆಚ್ಚು ಇಷ್ಟಪಟ್ಟು ಹಾತೊರೆಯುತ್ತಾರೆ ಮತ್ತು ಅಜ್ಜ-ಅಜ್ಜಿಯಂದಿರು ಸಹಾ ಮೊಮ್ಮಕ್ಕಳೊಡನೆ ಆಟವಾಡುತ್ತಾ ಹಾಯಾಗಿರಬೆಕೆಂಬ ಮಹದಾಸೆಗಳನ್ನು ಒಳಗೊಂಡಿರುತ್ತಾರೆ, ಹಾಗೂ ಹೀಗೆ ಬೆಳೆದ ಮಕ್ಕಳು ಮತ್ತು ಅಜ್ಜ-ಅಜ್ಜಿಯಂದಿರ ನಡುವೆ ಹೆಚ್ಚಿನ ಮಮತೆ ಪ್ರೀತಿ ಸಲುಗೆ ಇರುತ್ತದೆ ಹಾಗು ಒಬ್ಬರ ಮೆಲೊಬ್ಬರು ಹೆಚ್ಚು ಆವಲಂಬಿತರಾಗಿರುತ್ತಾರೆ ಇಂತಹ ಪ್ರೀತಿ ವೃದ್ದಾಪ್ಯದಲ್ಲಿ ವೈರಾಗ್ಯಕ್ಕೊಳಗಾಗದಂತೆ ಮಾಡಿ ಮನಸ್ಸಿನಲ್ಲಿ ಶಾಂತಿ ಮತ್ತು ಉತ್ಸಾಹವನ್ನು ಹೆಚ್ಚುಗೊಳಿದಸುತ್ತದೆ.
ಆಧುನಿಕ ಜೀವನ ಶೈಲಿಯ ಅಗತ್ಯವನ್ನು ಪೂರೈಸಿಕೊಳ್ಳುವ ನಿಟ್ಟನ ಹೊರಾಟದ ಬದುಕನ್ನು ಅನುಭವಿಸಿ ತಮ್ಮ ಮಕ್ಕಳ ಜೀವನದಲ್ಲಿ ನಡೆಯುವ ಅನೇಕ ಸಮಸ್ಯೆಗಳನ್ನು ಜೀವನದ ಉದ್ದಕ್ಕೂ ಹತ್ತಿರದಿಂದ ನೋಡಿ ಅನುಭವಿಸಿ ಮೆದುಳಿನ ಒತ್ತಡಗಳಿಗೆ ಸಿಲುಕಿ ಆಘಾತಕ್ಕೊಳಗಾಗಿ ಅನೇಕರು ಆಲ್ಜಮೈರ್, ವ್ಯಾಸ್ಕುಲರ್, ಡಮೆನೇಷಿಯಾ ವಿತ್ ಬಾಡೀಸ್, ಪಾರ್ಕಿನ್‌ಸನ್, ಡಿಪ್ರೆಶನ್ ಹಾಗೂ ಅನೇಕ ದೈಹಿಕ ಖಯಿಲೆಗಳಿಗೆ ಸಿಲುಕಿ ಅವುಗಳು ತಿಳಿಯುವ ಮೊದಲೇ ಸಾವಿನಲ್ಲಿ ಲೀನವಾಗುತ್ತಾರೆ, ಏಕೆಂದರೆ ಈ ರೀತಿಯ ಖಾಯಿಲೆಗಳ ಬಗ್ಗೆ ಜನರಲ್ಲಿ ಹೆಚ್ಚು ಅರಿವಿಲ್ಲ.
ಮಾನಸಿಕ ಖಾಯಿಲೆಗೆ ತುತ್ತಾಗಿ ನರಳಿದ ಒಂದು ಅಜ್ಜಿಯ ಕಥೆ
ಒಂದು ನಗರ ಪ್ರಾಂತ್ಯದ ಪುಟ್ಟ ಊರು ಅಲ್ಲಿ ಒಂದು ದೊಡ್ಡ ಕುಟುಂಬ ೫ ಜನ ಗಂಡು ಮಕ್ಕಳು ತುಂಬಿದ ಕುಟುಂಬ ಎಲ್ಲರೂ ಒಂದೇ ಊರಿನಲ್ಲಿ ಅಕ್ಕ-ಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು, ಅಜ್ಜಿಯ ಪತಿ ಸತ್ತು ಕೆಲವು ವರ್ಷಗಳಷ್ಟೇ ಕಳೆದಿದ್ದವು.
ಈ ಹಿಂದೆ ಆ ವೃದ್ದೇ ಬಹಳ ಜಂಬದಿಂದ, ಅಹಂಕಾರದಿಂದ ದಿಟ್ಟತೆಯಿಂದ ಬದುಕಿದ್ದರಂತೆ,ಆದರೆ ಸಾಯುವ ದಿನಗಳಲ್ಲಿ ಅವರು ಘೋರ ರೀತಿಯ ಸಾವನ್ನಪ್ಪಿದರು.ಅವರು ತನಗರಿವಿಲ್ಲದೇ ಆಗಾಗ ಮನೆಯಿಂದ ಹೊರಟು ಹೋಗುತ್ತಿದ್ದರು ಆಗ ಮಾತ್ರ ಅಜ್ಜಿಯ ಮೊಮ್ಮಕ್ಕಳು ಮತ್ತು ಆಕೆಯನ್ನು ಸದಾ ನೋಡಿಕೊಳ್ಳುತಿದ್ದ, ಆಕೆಯ ಪ್ರತಿ ಸೇವೆಯನ್ನು ಮಾಡುತಿದ್ದ ಆಕೆಯ ೪ನೇ ಮಗ ಹುಡುಕಿ ಕರೆತರುತಿದ್ದರು ಕೆಲವೂಮ್ಮೇ ೨/೩ ದಿನಗಳ ನಂತರ ಸಿಗುತ್ತಿದ್ದರಂತೆ.
ಆಕೆಯ ಪ್ರತಿ ಸೇವೆಯ ಜವಾಬ್ದಾರಿ ಆಕೆಯ ೪ನೇ ಮಗನದ್ದೇ ಆಗಿರುತಿತ್ತು ಆದರೆ (ಆಕೆಯ ೪ನೇ ಮತ್ತು ೫ನೇ ಸೊಸೆಯಂದಿರು ಮಾತ್ರ ಅವರಿಗೆ ಊಟ ಮತ್ತು ಕೆಲವು ಸೇವೆಗಳನ್ನು ಮಾಡುತಿದ್ದರು ಆದರೆ ಆ ಸೊಸೆಯಂದಿರಿಗೆ ಮದುವೆಯಾಗಿ ಬಂದ ಹಲವು ವರ್ಷಗಳ ವರೆಗೆ, ಆಕೆ ಏನೂ ಕಮ್ಮಿ ಕಾಟಕೊಟ್ಟಿಲ್ಲವೆಂಬುದು ಅಷ್ಟೇ ಸತ್ಯ) ಆದರೆ ಯಾರಿಗೂ ಅಜ್ಜಿಯ ಖಾಯಿಲೆ ಬಗ್ಗೆ ಅರಿವಿಲ್ಲದೇ ಅಜ್ಜಿಯನ್ನು ದೂಷಿಸಿ ಹೊಡೆಯುತ್ತಿದ್ದರು, ಈಗಲೂ ಸಹ ಅಜ್ಜಿಗೆ ಪಾರ್ಕಿನ್‌ಸನ್ ಅಥವಾ ಆಲ್ಜಮೈರ್ ಖಾಯಿಲೆಯ ಗುಣ ಲಕ್ಷಣಗಳಿದ್ದವೆಂದು ಯಾರಿಗೂ ಸಹ ಅರಿವಿಲ್ಲ.
ಇಲ್ಲಿ ಗಮನಿಸ ಬೇಕಾಗಿರುವುದೇನೆಂದರೇ ಆ ವೃದ್ದೆಯ ಎಲ್ಲಾ ಸೇವೆಯನ್ನು ಮಾಡುತಿದ್ದ ತನ್ನ ೪ ನೇಯ ಮಗನ ಹೆಸರು ಬಿಟ್ಟರೇ ಇನ್ನಾವುದರ ಅರಿವೂ ಆಕೆಗೆ ಇರಲಿಲ್ಲ ಇದು ಎಲ್ಲ ಖಾಯಿಲೆಗೂ ಮೀರಿದ ಬಂಧವೆನಿಸುತ್ತದೇ, ಕೊನೆಗೇ ಆ ವೃದ್ದೇ ಸತ್ತ ನಂತರವೂ ಅವರ ಉಳಿದ ಮಕ್ಕಳು ಸೊಸೆಯಂದಿರು ಸಾವಿನ ಕಾರ್ಯಗಳಿಂದ ದೂರವೇ ಉಳಿದಿದ್ದು ವಿಪರಿಯಾಸವೇ ಸರಿ, ತನ್ನ ೪ನೇ ಮಗ ಅವನ ಹೆಂಡತಿ, ೫ನೇ ಸೊಸೆ ಮತ್ತು ಎಲ್ಲಾ ಮೊಮ್ಮಕ್ಕಳು ಸೇರಿ ಕೊನೆಯ ಸಕಲ ಕಾರ್ಯಗಳನ್ನು ಮಾಡಿದ್ದರು.
ಅಜ್ಜಿಗೆ ಪಾರ್ಕಿನ್‌ಸನ್ ಅಥವಾ ಆಲ್ಜಮೈರ್ ಖಾಯಿಲೆಯ ಗುಣ ಲಕ್ಷಣಗಳಿದ್ದವೆಂದು ಯಾರಿಗೂ ಸಹ ಅರಿವಿರಲಿಲ್ಲ ಏಕೆಂದರೇ ಅದೊಂದು ಬೇಡದ ಜೀವ , ಮತ್ತು ಈ ಖಾಯಿಲೆಗಳ ಬಗ್ಗೆ ಅಷ್ಟು ಅರಿವಿರುವುದಿಲ್ಲ ಅದರಲ್ಲೂ ಹಳ್ಳಿಗಾಡಿನ ಜನರಿಗೆ ಇದರ ಅರಿವು ಕಮ್ಮಿ, ತುಂಬಾ ಓದಿದ ಜನರು ಮತ್ತು ಶ್ರೀಮಂತರು ಇವರಿಗೆ ಖಾಯಿಲೆಗಳ ಬಗ್ಗೆ ಅರಿವಿದ್ದರೂ ಬೇಡದ ವೃದ್ದ ಜೀವಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ತಾಳ್ಮೆ ಮತ್ತು ಸಮಯ ಇಲ್ಲ.
ತಂದೆ-ತಾಯಂದಿರ ಜೊತೆ ಉತ್ತಮ ಬಾಂಧವ್ಯ ಪ್ರೀತಿ ಹೊಂದಿ, ಮಕ್ಕಳು ಅವರ ದಿನನಿತ್ಯದ ಚಟುವಟಿಕೆಗಳನ್ನು ಗಮನಿಸಿದರೆ ಮಾತ್ರ ಈ ಖಾಯಿಲೆಗಳನ್ನು ತಪಾಸಣೆ ಮಾಡಿಸುವ ಮೂಲಕ ಪತ್ತೆ ಮಾಡಿ ಚಿಕಿತ್ಸೆಗೆ ಒಳಪಡಿಸಬಹುದು. ಆದರೆ ಮಕ್ಕಳಿಂದ ಪ್ರೀತಿ ವಾತ್ಸಲ್ಯ ಪಡೆಯುವ ವೃದ್ದ ಜೀವಗಳಿರುವುದಕಿಂತ ಮಕ್ಕಳಿಂದ ತಿರಸ್ಕಾರಕ್ಕೊಳಗಾದವರೇ ಹೆಚ್ಚು. ವೃದ್ದ ಜೀವಗಳ ಮನಸು ಪುಟ್ಟ ಮಗುವಿನಂತೆ ವ್ರದ್ದಾಪ್ಯ ಎನ್ನುವುದಕ್ಕಿಂತ ಅದೊಂದು ಮರು ಬಾಲ್ಯಾವದಿ, ಮಕ್ಕಳಿಗೆ ಹಣ ವೈಭೋಗ ಇದ್ಯಾವುದೂ ಮುಖ್ಯವಲ್ಲ ಪ್ರೀತಿ ಮಮತೆ ಕಾಳಜಿ ತಮ್ಮ ಮಕ್ಕಳ ಸಂತೋಷ ಇವೇ ಆ ನಡುಗುವ ವೈರಾಗ್ಯಕ್ಕೊಳಗಾದ ನೊಂದ ಜೀವಗಳ ಜೀವನಾಳ.
ವೃದ್ದರ ರಕ್ಷಣೆ ಮತ್ತು ಸುರಕ್ಷತೆ ಕುರಿತ ಭಾರತದ ಕಾನೂನಿನ ವಿವರ :
ಭಾರತದಲ್ಲಿ ಕಾನೂನಿನನ್ವಯ " MAINTAINENCE AND WELFARE OF PARENTS AND SENIOR CITIZENS ACT 2007 " ರಲ್ಲಿ ಜಾರಿಗೆ ತರಲಾಯಿತು ಇದರ ಅನ್ವಯ ಯಾವುದೇ ಮಕ್ಕಳು, ಸಾಕು ಮಕ್ಕಳು, ಅಥವಾ ಸಂಬಂಧಿಗಳು ತಮ್ಮ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿಯರನ್ನು ಆಹಾರ, ಔಷದ, ಆಶ್ರಯವನ್ನು ನೀಡಿ ನೋಡಿಕೊಳ್ಳಬೇಕು ಹಾಗೂ ಅವರನ್ನು ನೋಡಿಕೊಳ್ಳುವವರಿಗೆ ಅವರು ಇಷ್ಟಪಟ್ಟಲ್ಲಿ ಅವರ ಆಸ್ತಿಯನ್ನು ಸ್ವಇಚ್ಛೆಯಿಂದ ನೀಡಬಹುದು ಎಂದು ಹೇಳಲಾಗಿದೆ, ಒಂದುವೇಳೆ ಆ ವೃದ್ದರನ್ನು ನೋಡಿಕೊಳ್ಳದಿದ್ದರೇ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಅಂತಹ ಆರೋಪ ಸಾಭೀತಾದರೆ ದಂಡ ಹಾಗೂ ಸೆರೆವಾಸಗಳಂತಹ ಶಿಕ್ಷೆಗಳನ್ನು ಸಹಾ ನೀಡಬಹುದಾಗಿದೆ.
ಆದರೆ ಯಾವ ತಂದೆ-ತಾಯಂದಿರು ಸಹ ತಮ್ಮ ಮಕ್ಕಳು ಜೈಲಿಗೊಗುವುದನ್ನು ಬಯಸುವುದಿಲ್ಲ ತಮಗೆ ಎಷ್ಟೇ ಕಷ್ಟ ಬಂದರು ತಮ್ಮ ಮಕ್ಕಳು ಚೆನ್ನಾಗಿರಬೇಕೆಂಬ ಆಶಯ ಪ್ರತಿಯೊಬ್ಬರಲ್ಲು ಇರುತ್ತದೆ.
ಈ ಕಾನೂನಿನ ಪ್ರಮುಖ ಉದ್ದೇಶವೇನಂದರೆ ಅವಿಭಕ್ತ ಕುಟುಂಬದಲ್ಲಿ ಬದುಕಿದ ಬಹುತೇಕ ವೃದ್ದರನ್ನು ಒಬ್ಬಂಟಿಯಾಗಿ ದೂರವಿರಿಸಲಾಗುತ್ತದೆ ಇದರಿಂದ ಆಗುತ್ತಿರುವ ತೊಂದರೆಗಳಾದ ಧೈಹಿಕ, ಮಾನಸಿಕ, ಸಾಮಾಜಿಕ, ಹಣಕಾಸಿನ ಸಮಸ್ಯೆಗಳಿಗೆ ನೆರವಾಗುವುದು.
೨೦೦೧ ರ ಸೆನ್ಸಸ್ ಪ್ರಕಾರ ಹಿರಿಯ ನಾಗರೀಕರ ಅಂಕಿ ಅಂಶಗಳು:
"೨೦೦೧ ರ ಸೆನ್ಸಸ್ ಪ್ರಕಾರ ೭.೫೫ ರಷ್ಟು ಜನ ಹಿರಿಯ ನಾಗರೀಕರಾಗಿದ್ದು ಅಭಿವ್ಯಕ್ತ ಕುಟುಂಬದಲ್ಲಿನ ವೃದ್ದರು ಹೆಚ್ಚಿದ್ದಾರೆ, ಹಳ್ಳಿಗಳಲ್ಲಿ ಅಭಿವ್ಯಕ್ತ ಕುಟುಂಬಗಳು ಹೆಚ್ಚಿದ್ದು ೪೬.೯೧% ರಷ್ಟು ವೃದ್ದ ಪುರುಷರಿದ್ದು ೫೦% ರಷ್ಟು ವೃದ್ದ ಮಹಿಳೆಯರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ ೨೯,೦೦೦ ದಲ್ಲಿ ೧೩,೫೬೦ ರಷ್ಟು ಅಭಿವ್ಯಕ್ತ ಕುಟುಂಬಗಳಿವೆ, ಈ ಅಭಿವ್ಯಕ್ತ ಕುಟುಂಬಗಳಲ್ಲಿ ಹಿರಿಯರು ಮನೆಯ ಮುಖ್ಯಸ್ಥರಾಗಿ ಮುಖ್ಯಭೂಮಿಕೆಯಲ್ಲಿದ್ದಾರೆ ಮತ್ತು ಪ್ರೀತಿ-ವಿಶ್ವಾಸದಿಂದ ಮಕ್ಕಳು ಮೊಮ್ಮಕ್ಕಳು ಸಂಬಂಧಿಗಳೊಡನೆ ಸಂತೋಷದಿಂದಿದ್ದಾರೆ".
ಆದ್ದರಿಂದ ಈ ಪ್ರೀತಿ ಎಲ್ಲಾ ವೃದ್ದ ಮಗುವಿಗೂ ಸಿಗಬೇಕು ಅವರ ಸಾರ್ಥಕದ ಆ ಕೊನೇ ದಿನಗಳು ನಗುವಿನಿಂದ ಕೂಡಿರಬೇಕು ಹುಟ್ಟಿನಿಂದ ಪ್ರಾರಂಭವಾದ ಅಳು ನಗುವಿನೊಂದಿಗೆ ಕೊನೆಯಾಗಬೇಕು, ಆ ಮೂಲಕ ಬದುಕಿದ್ದಾಗಲೇ ಸ್ವರ್ಗದ ಅನುಭವವನ್ನು ಅನುಭವಿಸಬೇಕೆಂಬುದು ಎಲ್ಲರ ಆಶಯ.
Article by
Comments
Post a Comment