ಫ್ಯಾಷನ್ ಭಾವನೆಗಳ ನಗ್ನ ಕನ್ನಡಿ / FASHION IS A NAKED MIRROR OF EMOTIONS

ಫ್ಯಾಷನ್ ಭಾವನೆಗಳ ನಗ್ನ ಕನ್ನಡಿ!

ಫ್ಯಾಷನ್ ಯಾವುದೇ ಭಾಷೆಯ ಮಿತಿ ಇಲ್ಲದ ಮೌಖಿಕ ಸಂಭಾಷಣೆ, ಫ್ಯಾಷನ್ ಮಿತಿ ಇಲ್ಲದ ಒಂದು ಕಲೆ, ಫ್ಯಾಷನ್ ನಮ್ಮ ಭಾವನೆಗಳ ನಗ್ನ ಕನ್ನಡಿ, ಫ್ಯಾಷನ್ ನಮ್ಮ ಜೀವನದ ಪ್ರಮುಖ ಅಂಶ.
ಫ್ಯಾಷನ್ ಗಂಡು - ಹೆಣ್ಣು, ತೃತೀಯ ಲಿಂಗಿಗಳು ಅಥವಾ ಮಕ್ಕಳು, ವೃದ್ದರು, ಬಡವರು, ಶ್ರೀಮಂತರು ಎಂಬ ಭೇದವಿಲ್ಲದೇ ಪ್ರತಿಯೊಬ್ಬರಿಗೂ ಅವಷ್ಯವಾದ, ಪ್ರತಿಯೊಬ್ಬರ ಜೀವನಕ್ಕೂ ಮುಖ್ಯವಾದ ಒಂದು ಅಂಶ ಎಂದರೆ ತಪ್ಪಾಗಲಾರದು, ಏಕೆಂದರೆ ಮನುಷ್ಯ ತಾನು ಹುಟ್ಟಿದ ದಿನದಿಂದ ಹಿಡಿದೂ ತನ್ನ ಕೊನೆಯ ಅಂತ್ಯ ಸಂಸ್ಕಾರದವರೆಗೂ ಒಂದಲ್ಲಾ ಒಂದು ಬಟ್ಟೆಗಳಿಂದ ಅಲಂಕೃತಗೊಂಡೇ ಸಾಯುತ್ತಾನೆ.

“ಫ್ಯಾಷನ್ನ ಹುಟ್ಟಿಗೆ ಕಾರಣವಾದದ್ದು ಮನುಷ್ಯನ ಆಲೋಚನೆಯೇ ಆದರೂ, ಮನುಷ್ಯ ಸತ್ತರೂ ಫ್ಯಾಷನ್ ಸಾಯುವುದಿಲ್ಲಾ”, ಮನುಷ್ಯನ ಮಿತಿಗೆ ಸಿಲುಕದೆ ಫ್ಯಾಷನ್ ಬೃಹದಾಕಾರವಾಗಿ ಬೆಳೆದು ನಿಂತಿದೆ.

ಫ್ಯಾಷನ್ನ ಸಾಂಸ್ಕೃತಿಕ ವಿಶೇಷ :

ದೇಶ, ರಾಜ್ಯ, ಭಾಷೆ, ಜಾತಿ, ಪ್ರಾಂತ್ಯ, ಸಂಸ್ಕೃತಿ ಎಂದು ಮನುಷ್ಯ ಎಷ್ಟೇ ವಿಭಜನೆಗೊಂಡಿದ್ದರೂ ಆಯಾ ದೇಶ, ರಾಜ್ಯ, ಭಾಷೆ, ಜಾತಿ, ಪ್ರಾಂತ್ಯ, ಸಂಸ್ಕೃತಿಗೆ ತಕ್ಕಾಗೆ ಫ್ಯಾಷನ್ ತನ್ನ ವೈಷಿಷ್ಠ್ಯತೆಯನ್ನು ಹೆಚ್ಚು ಮಾಡಿಕೊಂಡು ಪ್ರತಿ ಸಂಸ್ಕೃತಿಗೂ ವಿಶೇಷತೆಯನ್ನು ಹೆಚ್ಚಿಸುತ್ತದೆ, ಮತ್ತು ಇದರ ಇನ್ನೊಂದು ವಿಶೇಷತೆಯೆಂದರೆ, ವಸ್ತ್ರ-ವಿನ್ಯಾಸಗಳು ತಮ್ಮ ಸಂಸ್ಕೃತಿಯ ಕನ್ನಡಿಯಾಗಿ ರೂಪಗೊಂಡಿರುತ್ತವೆ.
ಫ್ಯಾಷನ್ ಹುಟ್ಟಿದ್ದು ಮನುಷ್ಯನ ಕ್ರಿಯಾತ್ಮಕ ಕಲ್ಪನೆಯಿಂದಲೇ ಆದರೂ, ಅದನ್ನು ತಯಾರಿಸಲು ಮನುಷ್ಯ ಬಳಸಿದ್ದು ಪ್ರಾಕೃತಿಕ ಪರಿಕರಗಳನ್ನೇ, ಪ್ರಕೃತಿ ನಮಗೆ ನೈಸರ್ಗಿಕವಾಗಿ ನೀಡಿರುವ ಕೊಡುಗೆಯೇ ಫ್ಯಾಷನ್.

ಪ್ರಾಕೃತಿಕವಾಗಿ ಸಿಕ್ಕ ವಸ್ತುಗಳನ್ನು ಅಲಂಕಾರಿಕ ವಸ್ತುಗಳನ್ನಾಗಿ ಮಾರ್ಪಡಿಸಿ, ಮನುಷ್ಯ ತನ್ನ ಸಂಸ್ಕೃತಿಗೆ ತಕ್ಕಂತೆ ಆಯಾ ಅಲಂಕಾರಿಕ ವಸ್ತುಗಳಿಗೆ ವಿಷೇಶ ಗೌರವ, ಸ್ಥಾನ ಮಾನ ನೀಡಿದ್ದಾನೆ
  ಉದಾ : ತಾಳಿ, ಡೈಮೆಂಡ್ ರಿಂಗ್, ಅರಿಶಿನ, ಕುಂಕುಮ, ಹೂ.

ಯಾವುದೇ ಸಂಸ್ಕೃತಿಯ ಪ್ರತಿ ಹಬ್ಬಗಳು, ಕಾರ್ಯಕ್ರಮಗಳು ಹಾಗೂ ವಿಶೇಷ ಸಂಧರ್ಭಗಳಲ್ಲಿ ಅದಕ್ಕೆ ತಕ್ಕದಾದ ಹೊಸ ಉಡುಪುಗಳನ್ನು ಧರಿಸುವುದು ವಾಡಿಕೆಯಾಗಿದ್ದು ಅದರೊಂದಿಗೆ ಖುಷಿಯ ಭಾವನೆಯನ್ನು ಸಹಾ ಹಂಚಿಕೊಳ್ಳುತ್ತಾರೆ. ಕೆಲ ಸಂಸ್ಕೃತಿಗಳಲ್ಲಿ  ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಅದಕ್ಕೆ ಪೂರಕವಾದ ಕೆಲ ಉಡುಪುಗಳನ್ನೂ ಧರಿಸುವುದುಂಟು ಅದು ಅವರ ಭಾವನೆಯನ್ನು ವ್ಯಕ್ತಪಡಿಸುವ ಒಂದು ಪರಿ ಎಂಬುದು ನನ್ನ ಭಾವನೆ.

“ ನಮ್ಮ ಸಂಸ್ಕೃತಿಗಳು ಹೆಚ್ಚಾದಷ್ಟು ಪ್ಯಾಷನ್ನ ಕಲೆ ರೆಕ್ಕೆ ಬಿಚ್ಚಿ ಆಕಾಶದೆತ್ತರಕ್ಕೆ ಹಾರುತ್ತದೆ”

ಫ್ಯಾಷನ್ನಲ್ಲಿನ ಏಕರೂಪತೆಯ ಪರಿಕಲ್ಪನೆ :

ಯಾವುದೇ ದೇಶದ ಪ್ರತೀ ವ್ಯಕ್ತಿಯೂ ತಾನು ಶಾಲೆಗೆ ಸೇರಿದ ದಿನದಿಂದ ಹಿಡಿದೂ, ತಾನು ಮಾಡುವ ವೃತ್ತಿಯವರೆಗೂ ಏಕರೂಪತೆ(uniformality) ಯ ಜೊತೆಯಲ್ಲೆ ಬದುಕುತ್ತಾನೆ. ಏಕರೂಪತೆ ಪ್ರತೀ ದೆಶದಲ್ಲೂ ಇದೆ ಮತ್ತು ಇದು ಉಡುಪುಗಳ ಮೂಲಕ ಮನುಷ್ಯನ ವೃತ್ತಿಯನ್ನು,‍ ‍ಶೈಕ್ಷಣಿಕ ತರಗತಿಯನ್ನು ಅಥವಾ ಒಂದು ಗುಂಪನ್ನು ವಿಭಜನೆ ಮಾಡುವ ಮೂಲಕ ಆತನ ಐಡೆಂಟಿಟಿಯನ್ನು ತೋರಿಸುವುದರಲ್ಲಿ ಹೆಚ್ಚು ಪಾತ್ರವಹಿಸುತ್ತದೆ,ಇದು ಫ್ಯಾಷನ್ಗೆ ಇರುವ ಸಾಮರ್ಥ್ಯವಾದರೆ.

ಏಕರೂಪತೆಯ ಕರಾಳತೆಯೇನೆಂದರೆ, ಪ್ರತೀ ಮಗುವು ಶಾಲೆಗೆ ಸೇರಿದ ದಿನದಿಂದ ಹಿಡಿದೂ ಕಾಲೇಜು ಅಥವಾ ವೃತ್ತಿಗೆ ಸೇರಿದ ಮೇಲೂ ವಿಧಿಯಿಲ್ಲದೇ  ಏಕರೂಪತೆಯನ್ನು ಬಲವಂತವಾಗಿ ಒಪ್ಪಿಕೊಂಡು ಬದುಕಬೇಕಾಗಿರುವುದು, ಮತ್ತು ಇದರ ಇನ್ನೊಂದು ಕರಾಳತೆಯೆಂದರೇ ಆತ ಏಕರೂಪತೆಯನ್ನು ಪಾಲಿಸದಿದ್ದರೇ ಆತನನ್ನು ಶಿಸ್ತು ಇಲ್ಲವೆಂದು ಪರಿಗಣೆಸಿ ನಿಂದಿಸಿ ದಂಡ ಹಾಕುವ ಹೀನ ಪದ್ದತಿ, ಇದು ಶಾಲಾ,ಕಾಲೇಜುಗಳಲ್ಲಿ ಹೆಚ್ಚಾಗಿ ನಡೆಯುವುದ ಅಮಾನವೀಯ ಮತ್ತು ಇದು ಆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಭೀರುತ್ತದೆ. ಒಬ್ಬ ವ್ಯಕ್ತಿಯ ಅಥವಾ ಮಗುವಿನ ಗುಣ ಸ್ವಭಾವವನ್ನು ಏಕರೂಪತೆಯ ಸಮವಸ್ತ್ರದ ಮೂಲಕ ಅಳೆಯುವುದು ಮೂರ್ಖತನವೆಂಬುದು ನನ್ನ ಭಾವನೆ.

ಫ್ಯಾಷನ್ ಕ್ರೈಂ ಅಲ್ಲ, ಮನುಷ್ಯನ ಯಾವುದೇ ಉಡುಪುಗಳು ಹಾಗೂ ಅವನ ಬಾಹ್ಯ ನೊಟದ ಶೈಲಿ(style look) ಅವನ ನಡತೆಯನ್ನು ತೋರಿಸುವುದಿಲ್ಲ, ಮತ್ತು ಯಾರನ್ನು ಭಯ ಪಡಿಸುವುದಿಲ್ಲ. ಫ್ಯಾಷನ್ನ ಗಂಧಗಾಳಿಯೇ ಗೊತ್ತಿಲ್ಲದ ಕಾಲದಿಂದಲೂ ಕ್ರೈಂ ಗಳು ನಡೆಯುತ್ತಲೇ ಬಂದಿವೆ,
ಹಾಗೆ ನೋಡುವುದಾದರೆ ಹಿಂದಿನಿಂದಲೂ ನಮ್ಮ ಪೂರ್ವಿಕರ ದೆವ್ವ ಅಥವಾ ಆತ್ಮಗಳು ಏಕರೂಪತೆಯ ಉಡುಪುಗಳ ಪ್ರಕಾರವೇ ಬಿಳಿ ಬಟ್ಟೆಗಳನ್ನೇ ಧರಿಸಿ ಬರುತ್ತವೇ, ಬಿಳಿ ಶಾಂತಿಯ ಸಂಖೇತವಾದರೂ ನಾವು ಬಿಳಿ ಬಟ್ಟೆ ಧರಿಸಿದ ದೆವ್ವವನ್ನು ನೋಡಿ ಹೆದರುತ್ತೇವೇಕೇ?.

ಆಧುನಿಕ ಉಡುಪುಗಳು ಅತ್ಯಾಚಾರ  ಗಳನ್ನು ಪ್ರಚೋದಿಸುತ್ತದೆಯೇ ? :

ಯಾವುದೇ ರೀತಿಯ ಉಡುಪುಗಳು ಅತ್ಯಾಚಾರಗಳನ್ನು ಪ್ರಚೋದಿಸುವುದಿಲ್ಲಾ, ಏಕೆಂದರೆ, ಯಾವುದೇ  ದೇಶದಲ್ಲೂ ಉಡುಪುಗಳಿಂದ ಪ್ರಚೋದಿತರಾಗಿ ಅತ್ಯಾಚಾರ ನಡೆದಿರುವುದು ಬೆರಳೆಣಿಕೆಯಷ್ಟೇ, ಕೆಲ ಆಪಾದಿತರು  ಅತ್ಯಾಚಾರ ಸಂತ್ರಸ್ತೆ(rape victim)ಯ ಉಡುಪುಗಳು ನಮ್ಮನ್ನು ಅತ್ಯಾಚಾರ ಮಾಡಲು ಪ್ರಚೋದಿಸಿತೆಂದು ಕಾರಣ ನೀಡಿದ್ದರೂ, ಅದೊಂದು ಕಾರಣವಷ್ಟೇ, ಆದರೆ ನಿಜವಲ್ಲ!.

ಅತ್ಯಾಚಾರ ನಡೆಯಲು ಕಾರಣವಾಗುವುದು ಯಾವುದೇ ವ್ಯಕ್ತಿಯ ಆಂತರಿಕ ಒತ್ತಡ, ಆತ ಬಾಲ್ಯಾವಸ್ಥೆಯಿಂದ ಬೆಳೆದು ಬಂದ ಪರಿಸರದ ಹಿನ್ನೆಲೆ, ಆತನ ವ್ಯಕ್ತತ್ವ, ಆತನ ಮಾನಸಿಕ ಅಸ್ಥಿರತೆ, ಕೆಟ್ಟ ಸುಖದ ಬಯಕೆ, ಮತ್ತು ಆತನ ಆಂತರಿಕ ಕಾರಣಗಳಾಗಿರುತ್ತವೆ. ಇದ್ದಕೆ ಪೂರಕವಾಗಿಯೇ ಅತ್ಯಾಚಾರ ಕೇವಲ ವಯಸ್ಕ ಹೆಣ್ಣು ಮಕ್ಕಳ ಮೇಲಲ್ಲದೇ ವೃದ್ದೆಯರು ಮತ್ತು ಚಿಕ್ಕ ಮಕ್ಕಳ ಮೇಲೂ ನಡೆಯುತ್ತವೆ.

ಆದ್ದರಿಂದ ಅತ್ಯಾಚಾರಗಳನ್ನು ತಡೆಯಲು ನಮ್ಮ ದೇಶದ ಕಾನೂನುಗಳು ಇನ್ನಷ್ಟು ಕಠಿಣವಾಗಿ ರೂಪುಗೊಂಡು ನಮ್ಮ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಕೈಗೊಳ್ಳುತ್ತಿವೇ.

ಫ್ಯಾಷನ್ ಕೇವಲ ಆತ್ಮವಿಶ್ವಾಸದ ಹೊರಕನ್ನಡಿ :

ಯಾವದೇ ವ್ಯಕ್ತಿಯ ಬಣ್ಣ, ದೇಹದ ಆಕಾರ, ಬ್ರಾಂಡ್, ದುಬಾರಿ ಉಡುಪುಗಳಿಗೆ ಫ್ಯಾಶನ್ ಸೀಮಿತವಾಗಿಲ್ಲ.

ಹಣ ಚಾಲ್ತಿಯಲ್ಲಿಲ್ಲದ ಕಾಲದಿಂದಲೂ ಫ್ಯಾಶನ್ ಅಸ್ಥಿತ್ವದಲ್ಲಿದೆ, ಕಾಡಿನ ನಡುವೆ ವಾಸಿಸುವ ಆದಿವಾಸಿ ಜನಗಳ ಮಧ್ಯೆ ಹುಟ್ಟಿದ ಫ್ಯಾಶನ್, ಅವರ ಕಲೆ ಮತ್ತುಅವರ ಕ್ರಿಯಾತ್ಮಕ ಆಲೋಚನೆಗಳಿಂದ ಯಾವುದೇ ಸೀಮಿತಗಳಿಗೆ ಒಳಪಡದೇ ಬೆಳೆದು ಬಂದಿದೆ, ಆದಿವಾಸಿ ಜನರು ಧರಿಸುವ ಕಲಾತ್ಮಕ, ಸಾಂಸ್ಕೃತಿಕ ಉಡುಪುಗಳು ಮತ್ತು ಆಭರಣಗಳು ಅವರ ಆತ್ಮವಿಶ್ವಾಸ ಅಥವಾ ದಿಟ್ಟತನ ತೋರಿಸುತ್ತದೆ.


ಬ್ರಾಂಡ್ ಎಂಬುದು ಕೇವಲ ತೋರ್ಪಡಿಕೆಯ ವಸ್ತುವೇ ವಿನಹಃ, ಫ್ಯಾಷನ್ ಬ್ರಾಂಡ್ ಗಳನ್ನು ಮೀರಿದ್ದು ಮತ್ತು ಬ್ರಾಂಡ್ ಗಳನ್ನು ಸೃಷ್ಠಿಸಿದ್ದು.

ಫ್ಯಾಶನ್ನಲ್ಲಿ ಮುಖ್ಯವಾದುದು ಡ್ರೆಸ್ಸಿಂಗ್ ಸೆನ್ಸ್, ಯಾವ ವ್ಯಕ್ತಿಗೆ ತಾನು ಯಾವ ಸಂಧರ್ಬದಲ್ಲಿ, ಯಾವಾಗ, ಯಾವ ಭಗೆಯ ಉಡುಗಳು ಮತ್ತುಅದಕ್ಕೆ ಸರಿ ಹೊಂದುವ ವಸ್ತ್ರಾಲಂಕಾರಗಳನ್ನು ಧರಿಸಬೇಕು ಎಂಬ ಅರಿವಿರುತ್ತದೋ ಆತನಲ್ಲಿ ಡ್ರೆಸ್ಸಿಂಗ್ ಸೆನ್ಸ್ ಜಾಗೃತವಾಗಿರುತ್ತದೆ.

ಫ್ಯಾಶನ್ಗೆ ಯಾವುದೇ ವರ್ಣ ದೇಹದ ಆಕಾರ ಮುಖ್ಯವಲ್ಲ ತಾನು ಯಾವುದನ್ನು ಧರಿಸಿದರೆ ಚೆನ್ನಾಗಿ ಕಾಣುವುದಿಲ್ಲ ಎಂದು ಯೋಚಿಸದೆ, ತಾನು ಯಾವುದನ್ನು ಧರಿಸಿದರೆ ಹೆಚ್ಚು ಚೆನ್ನಾಗಿ ಕಾಣಿಸುತ್ತೇನೆ ಎಂದು ತನ್ನನ್ನು ತಾನು ಸಕಾರಾತ್ಮಕತೆಯಿಂದ ಪ್ರೋತ್ಸಾಹಿಸಿಕೊಂಡು ತನಗೆ ಸರಿಹೊಂದುವ ಆರಾಮದಾಯಕ(comfort)ಯೆನಿಸುವ ಉಡುಪುಗಳನ್ನು ಆತ್ಮವಿಶ್ವಾಸದಿಂದ ಧರಿಸಿದರೆ ಪ್ರತಿಯೊಬ್ಬರು ಚೆನ್ನಾಗೆ ಕಾಣುತ್ತಾರೆ.


ಇನ್ನಬ್ಬರ  ಆಯ್ಕೆಯ ಮೇಲೆ ನಾವು ನಮ್ಮ ಔಟ್ ಲುಕ್ ಅಥವಾ ಉಡುಪುಗಳನ್ನು ನಿರ್ಧರಿಸಿದರೆ ಅದು ನಮ್ಮಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ.
ಯಾರೋ ನಮ್ಮನ್ನು ನೋಡಿ ಆಡಿಕೊಳ್ಳುತ್ತಾರೆ, ನಮ್ಮ ವ್ಯಕ್ತಿತ್ವವನ್ನು ನಮ್ಮ ಉಡುಪುಗಳಿಂದ ಅಳೆಯುತ್ತಾರೆ ಎಂದು ನಮ್ಮ ಆಸೆಗಳನ್ನು ಬಲಿ ಕೊಟ್ಟು ನಮ್ಮ ಜೀವನದ ಹಲವು ಸುಖದ ಕ್ಷಣಗಳನ್ನು ಹಾಳು ಮಾಡಿಕೊಳ್ಳುವುದು ನಮ್ಮ ಮೂರ್ಖತನವಷ್ಟೇ, ಇನ್ನೊಬ್ಬರನ್ನು ನೋಡಿ ಆಡಿಕೊಳ್ಳುವುದು, ಉಡುಪುಗಳಿಂದ  ಮನುಷ್ಯನನ್ನು ಅಳೆಯುವುದು ಅವರ ವ್ಯಕ್ತಿತ್ವವದ ನಗ್ನತೆಯನ್ನು ಹಾಗೂ ಇನ್ನೊಬ್ಬರ ದೇಹದ ಆಕಾರ ಮತ್ತು ವರ್ಣದ ಮೇಲೆ ಅಣಕ ಅವರ ಮನಸ್ಸಿನ ಉಳುಕನ್ನು ತೋರಿಸುತ್ತದೆ
.
ಹಾಗೆ ನೋಡುವುದಾದರೆ ಜನರ ವಿವಿಧ ಕಮೆಂಟ್ಗಳು ಮತ್ತು ವಿಭಿನ್ನ ಆಯ್ಕೆಗಳಿಂದಲೇ ಫ್ಯಾಷನ್ ಇಷ್ಟರ ಮಟ್ಟಿಗೆ ಅನನ್ಯ ಮತ್ತು ಅಗಮ್ಯವಾಗಿ ಬೆಳದಿರುವುದು.

ಫ್ಯಾಷನ್ ಎಂಬುದು ನಮ್ಮಆಧಾರ/ಗುರುತು(identity) ತೋರಿಸುವ ಸಾಧನವಲ್ಲ, ಫ್ಯಾಷನ್ ಎಂಬು ನಮ್ಮ ನಡತೆ ಅಥವಾ ವ್ಯಕ್ತಿತ್ವದ ಕನ್ನಡಿಯಲ್ಲ.

“ಫ್ಯಾಷನ್ ನಮ್ಮ ಕ್ರಿಯಾಶೀಲತೆ, ನಮ್ಮ ಗತ್ತು, ಗಮ್ಯತೆ, ಸೌಮ್ಯತೆ, ಸಕಾರಾತ್ಮಕತೆ, ಆತ್ಮಗೌರವ, ಆತ್ಮವಿಶ್ವಾಸ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ನಗ್ನ ಕನ್ನಡಿ”.


ARTICLE BY
-ಭಕ್ತವತ್ಸಲ ಎನ್ ಜೆ




Comments

Popular posts from this blog

ದೆವ್ವ...? / GHOST...?

ವೃದ್ದಾಪ್ಯ ಸ್ವರ್ಗಕ್ಕೆ ೧,೨,೩ ಮೆಟ್ಟಿಲು / OLD AGE 1,2,3 STEPS FOR HEAVEN