ದೆವ್ವ...? / GHOST...?
ದೆವ್ವದ ಕುರಿತಾದ ಮನುಷ್ಯನ ಕಲ್ಪನೆ:
ಸಾಮಾನ್ಯವಾಗಿ ಅನೀರಿಕ್ಷಿತವಾಗಿ ಸಾವನ್ನಪ್ಪಿದವರು ತಮ್ಮ ಮೂಲ ಆಸೆಗಳನ್ನು ನೆರವೇರಿಸಿಕೊಳ್ಳದೆ ಸಾವನ್ನಪ್ಪಿದವರು ಆತ್ಮಗಳಾಗಿ ತೊಂದರೆ ಕೊಡುವರು ಅಥವಾ ಬೇರೆಯವರ ಮೈಮೇಲೆ ಬಂದು ತಮ್ಮ ಆಸೆಗಳನ್ನು ತೀರಿಸಿಕೊಳ್ಳುವರು ಎಂಬ ಕಲ್ಪನೆಗಳಿವೆ.
ಹಾಗಾದೆ ಸತ್ತ ಪ್ರತಿಯೊಬ್ಬ ವ್ಯಕ್ತಿಯು ದೆವ್ವವಾಗ ಬಹುದಾ ?.
ಹಾಗಾದರೆ ನಮ್ಮ ರಾಷ್ಠ್ರಪಿತ ಎಂದು ಕರೆಯಲ್ಪಡುವ ಗಾಂಧೀಜಿರವರು ರಾಮರಾಜ್ಯ ಸೃಷ್ಟಿಯಾಗಬೇಕೆಂದು ನಮ್ಮದೇಶದ ಅಭಿವೃದ್ದಿಯ ಬಗ್ಗೆ ಹಲವು ಆಸೆಗಳನ್ನು ಇಟ್ಟುಕೊಂಡಿದ್ದರು, ಹಾಗೆಯೇ ಅವರದ್ದು ಸಹಾ ಅನೀರಿಕ್ಷಿತ ಸಾವು. “ಹಾಗಾದರೆ ನಮ್ಮ ಗಾಂಧೀಜಿಯವರು ಸಹಾ ಆತ್ಮವಾಗಿರ ಬಹುದೇ?”. ಒಂದು ವೇಳೆ ಅವರು ಆತ್ಮವಾಗಿದ್ದರೆ ಇದುವರೆಗೂ ಅವರು ಏಕೆ ಯಾರ ಮೇಲು ಬರಲಿಲ್ಲ ಬಂದು ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗುತಿಲ್ಲ?. ಹಾಗೇನಾದರು ಆಗಿದ್ದರೆ ನಮ್ಮ ದೇಶದ ಜನ ಬುದ್ದಿಗೇಡಿ ರಾಜಕೀಯದವರ ಕೈಲಿ ಸಿಕ್ಕಿ ನರಳುತ್ತಿರಲಿಲ್ಲ ಅನಿಸುತ್ತದೆ.
ನಮ್ಮ ಭೂಮಿಯಲ್ಲಿ ಈ ಕ್ಷಣದವರೆಗೂ ಬದುಕಿರುವ ಜನರಿಗಿಂತ ಪ್ರಕೃತಿ ವಿಕೋಪಗಳಿಂದ, ಯುದ್ಧಗಳಿಂದ ಸಹಜವಾಗಿ, ಅಸಹಜವಾಗಿ ಸತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಹಾಗಾದರೆ ಇಲ್ಲಿಯವರೆಗೂ ಸತ್ತಿರುವವರು ಎಲ್ಲಿದ್ದಾರೆ ?, ಆತ್ಮಗಳಾಗಿದ್ದಾರ?, ಅಂಥವರಿಗೆ ಆಸೆಗಳೇ ಇರಲಿಲ್ಲವಾ?.
ನಾವು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ಒಬ್ಬ ಮನುಷ್ಯನ ಮೆದುಳಿಗೆ ಸ್ವಲ್ಪ ಪೆಟ್ಟಾದರು ಅಥವಾ ಹೆಚ್ಚು ಒತ್ತಡಗಳಾದರು ಹಿಂದಿನ ನೆನಪುಗಳೆಲ್ಲಾ ಹೊರಟು ಹೋಗುತ್ತವೆ ಆತ ಹುಚ್ಚನಾಗುವ ಸಾದ್ಯತೆಗಳು ಸಹಾ ಹೆಚ್ಚಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಹಾಗಾದರೆ ಮಣ್ಣಲ್ಲಿ ಮಣ್ಣಾಗುವ ದೇಹವೇ ಇಲ್ಲದ, ಮೆದುಳೇ ಇಲ್ಲದಾ ಸತ್ತ ವ್ಯಕ್ತಿಯ ಆತ್ಮ ತಾನು ಬದುಕಿದ್ದಾಗ ಹೊಂದಿದ್ದ ಆಸೆಗಳನ್ನು, ತಾನು ಬದುಕಿದ್ದಾಗ ನಡೆದ ಸಂಗತಿಗಳನ್ನು, ಸಂಬಂಧಗಳನ್ನು ನೋವು ನಲಿವುಗಳನ್ನು ನೆನಪಿಟ್ಳುಕ್ಕೊಳ್ಳಲು ಹೇಗೆ ಸಾಧ್ಯ ಹಾಗದರೆ ಮನುಷ್ಯನಿಗೆ ಮೆದುಳಿನ ಅವಷ್ಯಕತೆ ಇಲ್ಲವೇ?.
ದೆವ್ವ ಭೂತಗಳ ಕಲ್ಪನೆ / ಭ್ರಮೆ ಜಾಗತಿಕವಾಗಿರುವುದು ಹೇಗೆ ಸಾಧ್ಯವಾಯಿತು? :
ನಮ್ಮ ತಾಯಂದಿರು ಅಜ್ಜ-ಅಜ್ಜಿಯಂದಿರು ಕವಿ, ಕಥೆಗಾರರು, ನಾಟಕಕಾರರು ಈಗ ಸಿನಿಮಾ, ದೂರದರ್ಶನದವರು ದೆವ್ವ ಭೂತಗಳ ಕಥೆ, ದೆವ್ವ ಭೂತಗಳ ಲೀಲ ವಿನೋದಗಳನ್ನು ಅಥವಾ ಕರಾಳ ಕೃತ್ಯಗಳನ್ನು ವರ್ಣಿಸುವಾಗ ಪ್ರತಿಯೂಂದು ವ್ಯಕ್ತಿಗೆ, ಪ್ರತಿಯೂಂದು ಜನಾಂಗಕ್ಕೆ ದೆವ್ವ ಭೂತಗಳು ಇರುವುದೇ ಸತ್ಯ ಎಂದು ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ, ಪ್ರತಿಯೂಂದು ಮಗುವೂ ಚಿಕ್ಕಂದಿನಿಂದ ಗುಮ್ಮ ಇದೆ, ದೆವ್ವ ಇದೆ ಎಂದು ನಂಬಿಯೇ ಬೆಳಯುತ್ತದೆ. ಮತ್ತು ಸ್ವಲ್ಪ ಸುಳಿವು ಸಿಕ್ಕರೂ ಸಾಕು, ಸ್ವಲ್ಪ ಪ್ರಚೋದನೆ ಸಿಕ್ಕರೂ ಸಾಕು ದೆವ್ವಗಳನ್ನು ಕಂಡೆ ಎನ್ನಲು ಜನ ಸಿದ್ದರಾಗಿರುತ್ತಾರೆ ಕತ್ತಲಲ್ಲಿ ಒಂಟಿಯಾಗಿ ಸ್ಮಶಾನ, ಪಾಳು ಬಂಗಲೆಗಳ ಬಳಿ ಹೋಗಲು ನಿರಾಕರಿಸುತ್ತಾರೆ.
ಸಾವು ಪ್ರೀತಿ ಪಾತ್ರರನ್ನು ನಮ್ಮಿಂದ ಶಾಶ್ವವತವಾಗಿ ದೂರಮಾಡುತ್ತದೆ, ಹೀಗಾಗಿ ಸಾವು ಬದುಕಿರುವವರಲ್ಲಿ ಅಥೀವ ದುಃಖ ಮತ್ತು ಭಯವನ್ನುಂಟು ಮಾಡುವುದು ಸಹಜ, ಅತಿಯಾಗಿ ದಃಖಕ್ಕೀಡಾದ ವ್ಯಕ್ತಿ ಭ್ರಮಾಧೀನನಾಗುತ್ತಾನೆ ಸತ್ತ ವ್ಯಕ್ತಿಯನ್ನು ಕಂಡಂತೆ ಅವನ ಧ್ವನಿಯನ್ನು ಕೇಳಿದಂತೆ ಅವನಿಗೆ ಭಾಸವಾಗುತ್ತದೆ.
ಉದಾ : ಗಂಡ ಸಂಜೆ ಹೂತ್ತು ಬಂದು ಬಾಗಿಲು ತಟ್ಟಿ ತನ್ನ ಹೆಸರನ್ನು ಕರೆದಂತೆ, ನಡುಮನೆಯಲ್ಲಿ ಕುಳಿತು ಪೇಪರ್ ಓದಿದಂತೆ ಕಂಡಿತೆಂದು ಅನೇಕ ವಿಧವೆಯರು ಹೇಳುತ್ತಾರೆ. ಸತ್ತ ಮಗು ಅಂಗಳದಲ್ಲಿ ಆಡಿದಂತೆ ಅದು ಅಳುವಂತೆ ಕೇಳಿದ ಹಾಗೆ ಆಯಿತೆಂದು ಹೇಳುವ ತಾಯಂದಿರು ಸಾಕಷ್ಟಿದ್ದಾರೆ. ಇಂತಹ ಅನುಭವಗಳಿಂದ ಸತ್ತ ವ್ಯಕ್ತಿಯ ದೇಹ ಇಲ್ಲವಾದರು ಅವನ ಚೇತನ ಸ್ವಲ್ಪ ದಿನ ಅಲ್ಲೇ ಸುತ್ತ-ಮುತ್ತ ಇದ್ದು ಆತ್ಮೀಯರ ಕಣ್ಣಿಗೆ ಕಾಣಿಸಿಕೊಳ್ಳುವುದೆಂದು ಜನರ ತರ್ಕ, ಕೆಲ ತಪ್ಪಿತಸ್ಥ ಭಾವನೆ ಇದ್ದಂತಹ ಜನರಿಗೆ ಸತ್ತ ವ್ಯಕ್ತಿಯ ಭಯದಿಂದ ಅವನ ಆತ್ಮ ಬಂದು ತಮ್ಮನ್ನು ಭಯಪಡಿಸಿದಂತೆ ಕಂಡಿರಬಹುದು, ತಾನಿತ್ತ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಸೊಸೆಯ ಆತ್ಮ ತನ್ನನ್ನು ಬಂದು ಹೆದರಿಸಿದಂತೆ ಹಿಂಸಿಸಿದಂತೆ ಅತ್ತೆ ಭ್ರಮೆಗೆ ಒಳಗಾಗಬಹುದು, ಕೆಲವರು ತಮ್ಮನ್ನು ಶೋಷಿಸಿ ಅನ್ಯಾಯ ಮಾಡಿದವರಿಗೆ ನಾನು ಸತ್ತು ದೆವ್ವವಾಗಿ ನಿಮ್ಮನ್ನು ಕಾಡುತ್ತೇನೆ ಎಂದು ಹೆದರಿಸುತಾರೆ.
ಹೀಗೆ ಆತ್ಮ-ದೆವ್ವ ಅವುಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ದೆವ್ವಗಳ ಕಲ್ಪನೆ ರೂಪಗೊಂಡು ತಲೆಮಾರಿನಿಂದ ತಲೆಮಾರಿಗೆ ಅದು ದಾಖಲ್ಪಟ್ಟಿತು.
ಮೈಮೇಲೆ ದೆವ್ವ ಬರುವುದರ ವೈಜ್ಞಾನಿಕ ವಿವರಣೆ
ಮೈಮೇಲೆ ದೆವ್ವ ಬರುವುದಕ್ಕೆ ಮೂರು ಬಗೆಯ ವೈಜ್ಞಾನಿಕ ವಿವರಣೆಯನ್ನು ಕೊಡುತ್ತಾರೆ :
೧. ಉನ್ಮಾದದ ಪ್ರತ್ಯೇಕತಾ ಪ್ರತಿಕ್ರಿಯೆ / INDIVIDUAL RESPONSE TO MANIA :
ವಿಪರೀತ ಮನೋಕ್ಲೇಶಕ್ಕೆ ತುತ್ತಾದ ವ್ಯಕ್ತಿ ತನ್ನ ಕಷ್ಟ, ಸಮಸ್ಯ, ನೋವು, ಅವಮಾನಗಳನ್ನು ನೆರವಾಗಿ ಹೇಳಿಕೊಳ್ಳಲಾಗದಿದ್ದಾಗ, ಅಥವಾ ಹೇಳಿಕೊಂಡರು ಸಂಬಂಧಪಟ್ಟವರು ಸೂಕ್ತ ಪರಿಹಾರ, ಆಸರೆ ಕೊಡದಿದ್ದಾಗ ಮಾನಸಿಕವಾಗಿ ಬಹಳವಾಗಿ ಹಿಂಸೆ ಪಡುತ್ತಾನೆ, ಆಗ ಸುಪ್ತ ಮನಸ್ಸು ಉನ್ಮಾದದ ರಕ್ಷಣಾ ಕ್ರಮವನ್ನು ಕೈಗೊಂಡು ದೆವ್ವ ಬರುವ ವಿಶೇಷವನ್ನು ಪ್ರಕಟಿಸುತ್ತದೆ. ವ್ಯಕ್ತಿಯ ಜಾಗೃತ ಮನಸ್ಸಿಗೆ ಇದೊಂದೂ ಅರಿವಿರುವುದಿಲ್ಲ ಭಾವೋದ್ರೇಕಗಳು ಬಹಿರಂಗವಾಗಿ ಪ್ರಕಟವಾಗುತ್ತದೆ ಇದರಿಂದ ಸುಪ್ತ ಮನಸ್ಸಿನ ಒತ್ತಡ ಆತಂಕ ಕಡಿಮೆಯಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಇದನ್ನು “PRIMARY GAIN” ಎನ್ನುತ್ತಾರೆ.
ಹಾಗೆಯೇ ಮೈಮೇಲೆ ದೆವ್ವ ಬಂದ ವ್ಯಕ್ಕಿ ಎಲ್ಲರ ಗಮನ ಸೆಳೆಯುತ್ತಾನೆ ಕೆಲವರ ಸಹಾನುಭೂತಿ ಅನುಕಂಪವನ್ನು ಗಿಟ್ಟಿಸುತ್ತಾನೆ, ಶಿಕ್ಷೆಯ ಭಯವಿಲ್ಲದೆ ತನ್ನ ಮನದಾಳದ ಕೋಪ ಅಸಮದಾನಗಳನ್ನು ಹೊರಹಾಕಿ ಸಂಬಂಧ ಪಟ್ಟ ಕೃತ್ಯಗಳನ್ನು ಬಯಲಿಗೆಳೆದು ತೃಪ್ತಿ ಹೊಂದುತ್ತಾನೆ, ಕರ್ತವ್ಯ ಜವಾಬ್ದಾರಿಗಳಿಂದ ರಿಯಾಯಿತಿ ಹೊಂದುತ್ತಾನೆ ಇದನ್ನು “SECONDARY GAIN” ಎನ್ನುತ್ತಾರೆ.
[ತರುವಾಯದ ಲಾಭಗಳು] ಜಾಗೃತ ಮನಸು ಮತ್ತು ಸುಪ್ತ ಮನಸಿನ ನಡುವೆ “ತೆರೆ” ಇರುವುದರಿಂದ ವ್ಯಕಿಗೆ ಮೈಮೇಲೆ ದೆವ್ವ ಬಂದ ಅವಧಿಯ ವರ್ತಮಾನಗಳೊಂದು ಙ್ಞಪಕಕ್ಕೆ ಬರುವುದಿಲ್ಲ ಈ ಲಾಭಗಳಿಗಾಗಿ ಪದೇ ಪದೇ ಅಥವಾ ಅಗತ್ಯ ಬಿದ್ದಾಗ ವ್ಯಕ್ಕಿಯ ಮೈಮೇಲೆ ದೆವ್ವ ಬರುವುದು ವಿಶೇಷ ಪುನರಾವರ್ತನೆಯಾಗಿರುತ್ತದೆ. ಹೆಂಗಸರು ಉನ್ಮಾದ ವ್ಯಕ್ತಿತ್ವವನ್ನು ಉಳ್ಳವರಾಗಿದ್ದು ಶೋಷಣೆಗೆ, ಅನ್ಯಾಯಕ್ಕೆ ಒಳಗಾದವರು, ಉನ್ಮಾದದ ಮನೋರೋಗಕ್ಕೆ ಬಹಳ ಬೇಗ ಒಳಗಾಗುವುದರಿಂದ ಅವರ ಮೈಮೇಲೆ ದೆವ್ವ ಬರುವ ಪ್ರಕರಣಗಳು ಹೆಚ್ಚು.
೨. ಸಂವಹನ ಸಿದ್ದಾಂತ / COMMUNICATION THEORY :
ಯಾರಿಗೆ ನೇರವಾಗಿ, ಧೈರ್ಯವಾಗಿ ಭಾಷೆ ಅಥವಾ ಇನ್ಯಾವುದೊ ಸಹಜವಾದ ವಿಧಾನದ ಮೂಲಕ ತಮ್ಮ ಅನಿಸಿಕೆ, ಅಸಮಾಧಾನ, ನೋವು, ದುಃಖ, ಕೋಪ, ಭಯಗಳನ್ನು ಪ್ರಕಟಿಸಲು ಕಷ್ಟವೋ ಅಂಥವರು ಅಗತ್ಯ ಬಿದ್ದಾಗ ಅಸಹಜ, ಅಸಮಾನ್ಯ ಸಂಪರ್ಕ ವಿಧಾನಗಳನ್ನು ಬಳಸುತ್ತಾರೆ, ಮೈಮೇಲೆ ದೆವ್ವ ಬರುವುದು ಇಂತಹ ಒಂದು ಅಸಹಜ ಅಸಮಾನ್ಯ ಸಂವಹನ ವಿಧಾನ.
ಉದಾ : ಗರ್ಭಧಾರಣೆ ಆಗದಿರುವುದು ನನ್ನ ತಪ್ಪಲ್ಲ ನನ್ನೇಕೆ ದೂರುವಿರಿ, ನನ್ನ ಗಂಡನಲ್ಲಿ ಏನೋ ಕೊರತೆ ಇರಬಹುದು ಅದೇನೆಂದು ಕೇಳಿ ಪತ್ತೆ ಹಚ್ಚಿ ಅದರ ಬದಲು ಅವನಿಗೆ ಇನ್ನೊಂದು ಮದುವೆ ಮಾಡಲು ಹೊರಟಿರುವುದು ನ್ಯಾಯವೇ? ಎಂದು ಆಕೆ ನೇರವಾಗಿ ಕೇಳಲಾಗದಿದ್ದಾದಾಗ ಆ ಸ್ತ್ರೀಯ ಮೈಮೇಲೆ ದೆವ್ವ ಬಂದು ಈ ಪ್ರಶ್ನೆಗಳನ್ನು ಕೇಳಬಹುದು ಅವಳಿಗೆ ಅನ್ಯಾಯವಾಗುತ್ತಿದೆ ಎಂದು ಘೋಷಿಸ ಬಹುದು.
೩. ಸಾಮಾಜಿಕ-ಸಾಂಸ್ಕೃತಿಕ ಪ್ರಭಾವ, ನಿರೀಕ್ಷೆಯ ಸಿದ್ಧಾಂತ / SOCIO- CULTURAL EXPECTATION THEORY :
ಯಾವ ಸಮಾಜದಲ್ಲಿ ದೇವರು, ದೆವ್ವ ಜನರ ಮೈಮೇಲೆ ಬರುತ್ತದೆ, ಬಂದು ಒಳಿತನ್ನೋ- ಕೆಡುಕನ್ನೋ ಮಾಡುತ್ತದೆ ಎಂಬ ನಂಬಿಕೆ ಸಾರ‍್ವತ್ರಿಕವಾಗಿರುತ್ತದೋ ಅಂತಹ ಸಮುದಾಯಗಳಲ್ಲಿ ಮೈಮೇಲೆ ದೆವ್ವ ಬರುವ ಪ್ರಕರಣಗಳು ನಡೆಯುತ್ತವೆ, ಹಾಗೆಯೇ ವೈಜ್ಞಾನಿಕ ಮನೋಭಾವ, ಚಿಂತನೆ ಮಾಡುವ, ಪ್ರಶ್ನೆ ಕೇಳುವ ಪ್ರವೃತ್ತಿಯಿರುವ ಜನರಲ್ಲಿ ಈ ಪ್ರಕರಣಗಳು ಬಹಳ ಅಪರೂಪ. ಅನಕ್ಷರತೆ, ಅಜ್ಞಾನ, ಕುರುಡು ನಂಬಿಕೆ, ಅಸಹಾಯಕತನ, ಬಡತನ, ಪ್ರಾಥಮಿಕ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆ ಇಲ್ಲದಿರುವ ಹಿಂದುಳಿದ ಪ್ರದೇಶಗಳಲ್ಲಿರುವ ಜನಾಂಗಗಳಲ್ಲಿ ದೆವ್ವ ಬರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ, ಶಿಕ್ಷಿತರು, ಮಧ್ಯಮ, ಮೇಲ್ವವರ್ಗ, ಶ್ರಿಮಂತ ವರ್ಗಗಳಲ್ಲಿ ಈ ಪ್ರಕರಣಗಳು ಅಪರೂಪ.
೧೯೬೧ ರಲ್ಲಿನ ಡಾ: ಆರಿ ಕೀವ್ ಎಂಬ ತಙ್ಞರ ಹೇಳಿಕೆ ಯಾವ ಪ್ರಕಾರ, ಸಮಾಜ ಸಂಸ್ಕೃತಿಯಲ್ಲಿ ಪ್ರತಿಯೊಂದು ಮಗು ಬಾಲ್ಯದಿಂದಲೇ ದೇವಸ್ಥಾನ, ಜಾತ್ರೆ, ಉತ್ಸವಗಳಲ್ಲಿ ಪೂಜಾರಿಯ ಮೇಲೆ ಇತರರ ಮೇಲೆ ದೇವರು ಬರುವುದನ್ನು, ಹಾಗೆಯೇ ಕೆಲವರ ಮೇಲೆ ದೆವ್ವ ಬಂದು ಹೋಗುವುದನ್ನು ನೋಡುತ್ತಾ ಬೆಳೆಯುತ್ತದೆ, ಆ ಸಮಾಜ ಸಂಸ್ಕೃತಿಯಲ್ಲಿ ಮೈಮೇಲೆ ದೆವ್ವ, ದೇವರು ಬರುವುದು ಒಂದು ಸಹಜ, ಸ್ವಭಾವಿಕ, ಸಾಮಾಜಿಕ ಹಾಗೂ ನಿರೀಕ್ಷಿತ ನಡವಳಿಕೆಯಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿ ಒಂದಲ್ಲ ಒಂದು ಸಲ ತನ್ನ ಮೇಲೂ ಯಾವುದಾದರು ದೆವ್ವ ಅಥವಾ ದೇವರು ಬರಬಹುದು ಎಂದು ನಿರೀಕ್ಷೆ ಮಾಡುತ್ತಾನೆ.
೧೯೭೯ ರಲ್ಲಿ ಕ್ಲಾಸ್ ಎನ್ನುವ ತಙ್ಞ ಈ ರೀತಿ ಅಭಿಪ್ರಾಯ ಪಡುತ್ತಾನೆ, ಮೈಮೇಲೆ ದೇವರು ದೆವ್ವ ಬರುವುದು ಒಂದು ನಿರೀಕ್ಷಿತ ಐಚ್ಚಿಕ ನಡವಳಿಕೆ ಅದು ತನಗೂ ಆಗುತ್ತದೆ, ಈ ಸನ್ನಿವೇಶದಲ್ಲಿ ನಡೆದೇತೀರುತ್ತದೆ ಎಂಬ ನಂಬಿಕೆಯಿಂದ ಆ ಸನ್ನಿವೇಶಗಳಲ್ಲಿ ವ್ಯಕ್ತಿಗಳು ತಮಗರಿವಿಲ್ಲದಂತೆಯೇ ಆ ರೀತಿ ನಡೆದು ಕೊಂಡುಬಿಡುತ್ತಾರೆ.
ಮೈಮೇಲೆ ದೆವ್ವ ಬರುವ ವ್ಯಕ್ತಿಗಳನ್ನು ಅದ್ಯಯನ ಮಾಡಿದಾಗ ತಿಳಿದು ಬಂದ ಅಂಶಗಳು:
೧. ಹೆಚ್ಚಿನ ಪ್ರಕರಣಗಳಲ್ಲಿ ವ್ಯಕ್ತಿ ಸ್ತ್ರೀ, ದೆವ್ವ ಬರುವ ಪ್ರಕರಣಗಳಲ್ಲಿ ಬಹುತೇಕ ಪ್ರಕರಣದ ವ್ಯಕ್ತಿಗಳು ಸ್ತ್ರೀಯರೇ ಆಗಿರುತ್ತಾರೆ.
೨. ವ್ಯಕ್ತಿಯ ವಯಸ್ಸು ಸಾಮಾನ್ಯವಾಗಿ ೨೦ ರಿಂದ ೩೦ ವರ್ಷ.
೩. ಈ ವ್ಯಕ್ತಿಗಳು ಕೆಳವರ್ಗ ಅಥವಾ ಮಧ್ಯಮವರ್ಗಗಳಿಂದ ಬಂದವರು.
೪. ಹೆಚ್ಚಿನವರು ಓದು ಬರಹ ಗೊತ್ತಿಲ್ಲದ ನಿರಕ್ಷರಿಗಳು, ಓದು ಬರಹ ಗೊತ್ತಿದ್ದರೆ ಕೆಲವೇ ವರ್ಷಗಳು ಮಾತ್ರ ಶಾಲೆಗೆ ಹೋಗಿದ್ದವರು.
೫. ೧೦ವರ್ಷ ವಯಸ್ಸಿಗೆ ಕೆಳಪಟ್ಟವರಲ್ಲಿ ೫೦ ವರ್ಷ ಮೇಲ್ಪಟ್ಟವರಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ.
೬. ಈ ವ್ಯಕ್ತಿಗಳು ಸುಲಭವಾಗಿ ಬೇರೆಯವರ ಮಾತು, ಸೂಚನೆಗಳನ್ನು ಕೇಳಿ ಪಾಲಿಸುವವರಾಗಿದ್ದರು.
೭. ದೆವ್ವ ಬರುವ ಹೆಚ್ಚಿನ ಪ್ರಕರಣಗಳಲ್ಲಿ ಇದು ಸ್ವಲ್ಪಕಾಲ ಮಾತ್ರ ನಡೆದು ಆನಂತರ ಬರುವುದು ನಿಲ್ಲುತ್ತಿತ್ತು, ಅಪರೂಪಕ್ಕೆ ಮಾತ್ರ POSSESION ವರ್ಷಗಳಕಾಲ ಮುಂದುವರೆದಿತ್ತು.
೮. ಹೆಚ್ಚಿನ ಪ್ರಕರಣಗಳಲ್ಲಿ ಮೈಮೇಲೆ ಬಂದ ದೆವ್ವ ವ್ಯಕ್ತಿಗೆ ಅಥವಾ ಆ ಸಮುದಾಯದವರಿಗೆ ಗೊತ್ತಿದ್ದ ವ್ಯಕ್ತಿಯದಾಗಿತ್ತು, ಅಪರಿಚಿತ ದೆವ್ವ ಬರುವುದು ಕಡಿಮೆ.
೯. ದೆವ್ವ ಬಂದಾಗ ಕೈಲಾಗದ ದುರ್ಬಲಳಾದ ಸ್ತ್ರೀಗೂ ಅತೀವ ಬಲ ಬರುತ್ತದೆ ಏಕೆಂದರೆ ದೇಹದಲ್ಲಿ ಮೀಸಲು ಶಕ್ತಿ, “ಆಡ್ರಿನಲಿನ್” ರಸದೂತ್ತಡದ ಪ್ರಭಾವದಿಂದ ಈ ಶಕ್ತಿ ಪ್ರದರ್ಶನಗೊಳ್ಳುತ್ತದೆ, ನೋಡುಗರಲ್ಲಿ ಆಶ್ಚರ್ಯವನ್ನುಂಟು ಮಾಡುತ್ತದೆ.
ನೀವೇನು ಮಾಡಬೇಕು ?
ಮೈಮೇಲೆ ದೆವ್ವ ಬಂದು ಸಂಕಟ ಪಡುತ್ತಿರುವ ವ್ಯಕ್ತಿಗೆ ನೀವು ನೇರವಾಗಿ ಕುಳಿತು ಸಾಮಾಧಾನದಿಂದ, ಸಹಾನುಭೂತಿಯಿಂದ ಕಷ್ಟ-ಸುಖಗಳನ್ನು ವಿಚಾರಿಸಿ ವ್ಯಕ್ತಿ ತನ್ನ ನೋವು, ನಿರಾಶೆ, ಅಸಮಾದಾನಗಳನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಅಗತ್ಯವೆನಿಸಿದರೆ ವ್ಯಕ್ತಿಯನ್ನು ಮನೋವೈದ್ಯರ ಬಳಿಗೆ ಕಳುಹಿಸಿ. ಭೂತೋಚ್ಚಾಟನೆ, ಮಾಟ-ಮಂತ್ರ ಎಂದು ಜನರು ರೋಗಿಗೆ ಮತ್ತಷ್ಟು ಹಿಂಸೆ ಕೊಡುವುದನ್ನು ತಪ್ಪಿಸಿ ಮನೆಯವರಿಗೆ ತಿಳುವಳಿಕೆ ಹೇಳಿ ಅದರ ಕುರುಡು ನಂಬಿಕೆ ಕಂದಾಚಾರಗಳನ್ನು ಹೊಗಲಾಡಿಸಿ.
``ದೆವ್ವ ಭೂತಗಳು ವಾಸ್ತವದಲ್ಲಿ ಇಲ್ಲ ಅವೆಲ್ಲ ನಮ್ಮ ಮನಸ್ಸಿನ ಕಲ್ಪನೆಗಳಷ್ಟೆ ಮತ್ತು ಕೆಲವರ ಭ್ರಮೆಗಳು, ದೆವ್ವ ಭತಗಳೇ ಇಲ್ಲದಿರುವಾಗ ಅವು ವ್ಯಕ್ತಿಯ ಮೈಮೇಲೆ ಬರುವ ಪ್ರಶ್ನೆಯೇ ಬರುವುದಿಲ್ಲ”.
ARTICLE BY
CREDITS : THE NIMHANS DOCTOR
REFFERED BY THE BOOK WRITTEN BY THE NIMHANS DOCTOR
Comments
Post a Comment