ಫ್ಯಾಷನ್ ಭಾವನೆಗಳ ನಗ್ನ ಕನ್ನಡಿ / FASHION IS A NAKED MIRROR OF EMOTIONS
ಫ್ಯಾಷನ್ ಭಾವನೆಗಳ ನಗ್ನ ಕನ್ನಡಿ! ಫ್ಯಾಷನ್ ಯಾವುದೇ ಭಾಷೆಯ ಮಿತಿ ಇಲ್ಲದ ಮೌಖಿಕ ಸಂಭಾಷಣೆ, ಫ್ಯಾಷನ್ ಮಿತಿ ಇಲ್ಲದ ಒಂದು ಕಲೆ, ಫ್ಯಾಷನ್ ನಮ್ಮ ಭಾವನೆಗಳ ನಗ್ನ ಕನ್ನಡಿ, ಫ್ಯಾಷನ್ ನಮ್ಮ ಜೀವನದ ಪ್ರಮುಖ ಅಂಶ. ಫ್ಯಾಷನ್ ಗಂಡು - ಹೆಣ್ಣು, ತೃತೀಯ ಲಿಂಗಿಗಳು ಅಥವಾ ಮಕ್ಕಳು, ವೃದ್ದರು, ಬಡವರು, ಶ್ರೀಮಂತರು ಎಂಬ ಭೇದವಿಲ್ಲದೇ ಪ್ರತಿಯೊಬ್ಬರಿಗೂ ಅವಷ್ಯವಾದ, ಪ್ರತಿಯೊಬ್ಬರ ಜೀವನಕ್ಕೂ ಮುಖ್ಯವಾದ ಒಂದು ಅಂಶ ಎಂದರೆ ತಪ್ಪಾಗಲಾರದು, ಏಕೆಂದರೆ ಮನುಷ್ಯ ತಾನು ಹುಟ್ಟಿದ ದಿನದಿಂದ ಹಿಡಿದೂ ತನ್ನ ಕೊನೆಯ ಅಂತ್ಯ ಸಂಸ್ಕಾರದವರೆಗೂ ಒಂದಲ್ಲಾ ಒಂದು ಬಟ್ಟೆಗಳಿಂದ ಅಲಂಕೃತಗೊಂಡೇ ಸಾಯುತ್ತಾನೆ. “ಫ್ಯಾಷನ್ನ ಹುಟ್ಟಿಗೆ ಕಾರಣವಾದದ್ದು ಮನುಷ್ಯನ ಆಲೋಚನೆಯೇ ಆದರೂ, ಮನುಷ್ಯ ಸತ್ತರೂ ಫ್ಯಾಷನ್ ಸಾಯುವುದಿಲ್ಲಾ” , ಮನುಷ್ಯನ ಮಿತಿಗೆ ಸಿಲುಕದೆ ಫ್ಯಾಷನ್ ಬೃಹದಾಕಾರವಾಗಿ ಬೆಳೆದು ನಿಂತಿದೆ. ಫ್ಯಾಷನ್ನ ಸಾಂಸ್ಕೃತಿಕ ವಿಶೇಷ : ದೇಶ, ರಾಜ್ಯ, ಭಾಷೆ, ಜಾತಿ, ಪ್ರಾಂತ್ಯ, ಸಂಸ್ಕೃತಿ ಎಂದು ಮನುಷ್ಯ ಎಷ್ಟೇ ವಿಭಜನೆಗೊಂಡಿದ್ದರೂ ಆಯಾ ದೇಶ, ರಾಜ್ಯ, ಭಾಷೆ, ಜಾತಿ, ಪ್ರಾಂತ್ಯ, ಸಂಸ್ಕೃತಿಗೆ ತಕ್ಕಾಗೆ ಫ್ಯಾಷನ್ ತನ್ನ ವೈಷಿಷ್ಠ್ಯತೆಯನ್ನು ಹೆಚ್ಚು ಮಾಡಿಕೊಂಡು ಪ್ರತಿ ಸಂಸ್ಕೃತಿಗೂ ವಿಶೇಷತೆಯನ್ನು ಹೆಚ್ಚಿಸುತ್ತದೆ, ಮತ್ತು ಇದರ ಇನ್ನೊಂದು ವಿಶೇಷತೆಯೆಂದರೆ, ವಸ್ತ್ರ-ವಿನ್ಯಾಸಗಳು ತಮ್ಮ ಸಂಸ್ಕೃತಿಯ ಕನ್ನಡಿಯಾಗಿ ರೂಪಗೊಂಡಿರುತ್ತವೆ. ಫ್ಯಾಷನ್ ಹುಟ್ಟಿದ್ದು ಮನುಷ್ಯನ ಕ್ರಿ...