ನಶೆಯ ಸುಳಿಯಲ್ಲಿ ಟೀನೆಜರ್ಸ್ / Teenagers in a vortex of drugs


 

ಕೊಕೇನ್, ಗಾಂಜ, ಹೆರಾಯಿನ್, ಚರಸ್ಸ್, ನಿಕೋಟಿನ್, ಏಲ್‌ಎಸ್‌ಡಿ, ಹುಕ್ಕ, ಕೋಕಲಿಫ್, ಕ್ಯಾನಬೀಸ್  ಮತ್ತು ಕ್ಯಾನಬಿಸ್ ರೇಸಿಸ್, ಗಟ್ಕಾ, ಲಿಕ್ಕರ್ಸ್.

ಇವು ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ, ಯುವ ಪೀಳಿಗೆ, ಯವ್ವನದ ಸುಳಿಯಲ್ಲಿರುವ ಜನರನ್ನು ಹೆಚ್ಚು ಆಕರ್ಷಿಸುತ್ತಿದ್ದು, ತುಂಬಾ ಉದ್ವಿಗ್ನಕರ ಪರಿಸ್ಥಿತಿಯನ್ನು ಯುವ ಜನರ ಮೇಲೆ ಬೀರುತ್ತಿದೆ. ಈ ರೀತಿಯ ಮಾಧಕ  ವಸ್ತುಗಳಿಗೆ ನಮ್ಮ ಟೀನೇಜರ್ಸ್ ಬೇಗ ತಮ್ಮದೇ ಆದ ಕಾರಣಗಳಿಗೆ ತಮ್ಮನ್ನು ತಾವು ಬಲಿ ಕೊಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವ ಯುವ ಜನತೆ, ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲದೆ ಮಾಧಕ ವಸ್ತುಗಳು ಎಲ್ಲಾ ವಯಸ್ಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ, ಎಲ್ಲಾ ರೀತಿಯ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ.


ಟೀನೇಜರ್ಸ್ ಮಾಧಕ ವ್ಯಸನಿಗಳಾಗಲು ಕಾರಣಗಳು :


ಈ ರೀತಿ ಯುವ ಜನತೆ ಮಾಧಕ ವಸ್ತುಗಳ ಸುಳಿಯಲ್ಲಿ ಸಿಲುಕಲು ಗೊತ್ತಿದ್ದೊ ಗೊತ್ತಿಲ್ಲದೆಯೋ ಒಂದು ರೀತಿಯಲ್ಲಿ ಹಿರಿಯರು (ಪೋಷಕರು, ಶಿಕ್ಷಕರು) ಮುಂತಾದವರು ಸಹ ಕಾರಣರಾಗಿರುತ್ತಾರೆ, ಹೇಗೆಂದರೆ ಪೋಷಕರು ಮತ್ತು ಶಿಕ್ಷಕರು ನೀಡುವ ಕೆಲವು ಒತ್ತಡದ ಕೆಲಸಗಳು, ಮನೆಯ ಸಮಸ್ಯೆಗಳು, ಪೋಷಕರ ನಡುವಿನ ವೈವಾಹಿಕ ಸಮಸ್ಯೆಗಳು, ಸಾಮಾಜಿಕ ಜೀವನದ ಒತ್ತಡಗಳು, ಮಾನಸಿಕ ಸಮಸ್ಯೆಗಳು, ಹುಡುಗ ಹುಡುಗಿಯರ ಆಕರ್ಷಣೆ, ಪ್ರೇಮ-ಪ್ರೀತಿಯಲ್ಲಿನ ವೈಫಲ್ಯತೆಗಳು, ಆರ್ಥಿಕ ಸಮಸ್ಯೆಗಳು, ಸಮಾಜದಲ್ಲಿ ನಡೆಯುವಂತಹ ಕೆಲವು ಹೀನ ಕೃತ್ಯಗಳು ಮನಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.


ಈ ರೀತಿ ಹಲವಾರು ಸಮಸ್ಯೆಗಳಿಂದ ಬೇಗ ಹೊರಬರಲು ಯುವ ಜನತೆ ಮಾಧಕ ವಸ್ತುಗಳಿಗೆ, ಹೆಚ್ಚು ವ್ಯಸನಿಗಳಾಗಿ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳನ್ನು ಮಾಧಕ ವಸ್ತುಗಳ ಅಮಲಿನಲ್ಲಿ ಹುಡುಕುತ್ತಾರೆ, ಇದು ಒಂದು ಬಗೆಯ ಕಾರಣವಾದರೆ, ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಗೆ ಹೆಚ್ಚು ಮಾರು ಹೋಗುತ್ತಿರುವ ಯುವ ಜನತೆ ಮಾಧಕ ವಸ್ತುಗಳ ಅಮಲಿಗೆ ಆಕರ್ಷಿತರಾಗಿ ಮಾಧಕ ವಸ್ತುಗಳ ದಾಸರಾಗಿ ಜೀವನವನ್ನು ಕ್ಷಣಿಕ ಸುಖಮಯವನ್ನಾಗಿಡಲು ಈ ದಾರಿಯನ್ನು ಹುಡುಕುತ್ತಿದ್ದಾರೆ. ಈ ಮಾಧಕ ವಸ್ತುಗಳನ್ನು ಒಮ್ಮೆ ತೆಗೆದುಕೊಂಡರೆ ಮತ್ತೊಮ್ಮೆ ತೆಗೆದುಕೊಳ್ಳಬೆಕೆಂದು ಆಸೆ ಮತ್ತು ಕಳವಳ ಉಂಟಾಗುವುರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಅದರ ಅಮಲಿಗೆ ಒಳಪಡಬೇಕೆಂದು ಅದಕ್ಕೆ ವ್ಯಸನಿಗಳಾಗುತ್ತಾರೆ.

ಹುಡುಗರಷ್ಟೆ ಅಲ್ಲದೆ ಕೆಲ ಹುಡುಗಿಯರು ಸಹ ಈ ಮಾಧಕ ವಸ್ತುಗಳ ಲೋಕದಲ್ಲಿ ಈಜಾಡುತ್ತಿದ್ದಾರೆ. ಕೆಲ ಹುಡುಗಿಯರು ಹುಡುಗರಿಗಿಂತ ನಾವೇನು ಕಡಿಮೆ ಇಲ್ಲವೆಂದು ಜೀವನವನ್ನು ಈ ರೀತಿ ಕೆಟ್ಟದಾಗಿ ಎಂಜಾಯ್ ಮಾಡಲು ಸಮಾನತೆಯ ಕಾರಣ ನೀಡುವ ಮನಸ್ಥಿತಿ ಹೊಂದಿದ್ದರೆ ಅದು ಶೋಚನೀಯ ಎನ್ನಬಹುದು ಅಷ್ಟೇ. ಏಕೆಂದರೆ ಸಮಾನತೆ ಪ್ರತಿಯೊಬ್ಬರ ಹಕ್ಕಾಗಿರುತ್ತದೆ ಮತ್ತು ಅದು ಗಂಡಾಗಲಿ ಹೆಣ್ಣಾಗಲಿ ಭೂಮಿಯ ಮೇಲಿನ ಯಾವುದೇ ಜೀವಿಯಾಗಲಿ ಒಳ್ಳೆಯ ಕೆಲಸಗಳನ್ನು ಮಾಡಲು ಸರ್ವರು ಸಮಾನರಾಗೆ ಸೃಷ್ಟಿಯಾಗಿದ್ದಾರೆ, ಕೆಟ್ಟ ಕೆಲಸಗಳು ಯಾರೆ ಮಾಡಿದರು ಅದಕ್ಕೆ ಕಾರಣ ಅವರ ಮನಸ್ಥಿತಿ ಮತ್ತು ಪರಿಸ್ಥಿತಿ ಎಂಬುದು ನನ್ನ ಭಾವನೆ.

ಗಾಂಜಾದಂತಹ ಮಾಧಕ ವಸ್ತು ನಮ್ಮ ಭಾರತದ ಸಂಸ್ಕೃತಿಯ ಇತಿಹಾಸದಲ್ಲಿ ಸಾಧು-ಸಂತರು “ಭಂಗಿ” ಎಂಬ ರೂಪದಲ್ಲಿ ಬಳಸುತ್ತಿದ್ದರು ಎಂಬುದು ಕಂಡು ಬರುತದೆ. ಅದು ಸತ್ಯ  ಕೂಡ. ಇಂದಿಗೂ ಕಾಶಿ, ಹರಿದ್ವಾರ, ಕೇದಾರನಥ ಮತ್ತು ಹಿಮಾಲಯದ ತಪ್ಪಲಿನಂತಹ ಹಲವು ಧಾರ್ಮಿಕ ಕ್ಷೇತ್ರಗಳಲ್ಲಿ ಸಾಧು-ಸಂತರು ಇಂದಿಗೂ ಕೂಡ ಉಪಯೋಗಿಸುತ್ತಿದ್ದು ಇಂದಿಗೂ ಭಂಗಿ ನಿಷೇಧ  ಸಾದ್ಯವಾಗಿಲ್ಲ.

ಭಾರತದಲ್ಲಿ ಮಾಧಕ ವಸ್ತುಗಳ ತಡೆಗೆ ವಿಧಿಸಿರುವ ಕಾನೂನುಗಳು :


ಭಾರತದಲ್ಲಿ ಎಲ್ಲಾ ಮಾಧಕ ವಸ್ತುಗಳನ್ನು ನಿಷೇಧಿಸಲು ಭಾರತ ಸರ್ಕಾರವು ಅನೇಕ ಕಾನೂನುಗಳನ್ನು ರೂಪಿಸಿದೆ. ಮೊದಲು ಲೋಕಸಭೆಯಲ್ಲಿ ‘ದಿ ನ್ಯಾರೋಟಿಕ್ ಡ್ರಗ್ಸ್ ಅಂಡ್ ಸೈಕೊ ಟ್ರೋಫಿಕ್ ಸಬ್‌ಸ್ಟೆನ್ಸಸ್’ ಕಾಯ್ದೆಯನ್ನು ೧೩ ಆಗಸ್ಟ್ ೧೯೮೫ ರಂದು ಅಧಿಕೃತವಾಗಿ ಜಾರಿಗೆ ತಂದಿತ್ತು. ಇದರ ಪ್ರಕಾರ ಯಾವುದೇ ವ್ಯಕ್ತಿ ಮಾಧಕ ವಸ್ತುಗಳ ಉತ್ಪಾದನೆ ಮಾಡುವುದು, ಶೇಖರಿಸಿ ಇಡುವುದು, ಸಾಗಾಣಿಕೆ ಮಾಡುವುದು, ಮಾರಾಟ ಮಾಡುವುದು, ಕೋಕ ಕಾಯ್ದೆ ೧೯೮೫ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಇದಕ್ಕೆ ಕಠಿಣ ಶಿಕ್ಷೆ ಹಾಗೂ ದಂಡ ಹಾಕುವ ಅಧಿಕಾರ ನಮ್ಮ ನ್ಯಾಯಾಲಯ ಹೊಂದಿದೆ.

ಈ ರೀತಿ ನಮ್ಮ ದೇಶದಲ್ಲಿ ಮಾಧಕ ವಸ್ತುಗಳ ಸೇವನೆಗೆ ಹಾಗೂ ಮಾರಾಟಗಳನ್ನು ಕಡಿವಾಣ ಹಾಕಲು ಹಲವು ಕಾನೂನುಗಳು ಜಾರಿಯಲ್ಲಿ ಇದ್ದರು ಕಾನೂನು ಭಾಹಿರವಾಗಿ ಮಾಧಕ ವಸ್ತುಗಳ ಬಳಕೆ ಹಾಗೂ ಮಾರಾಟ ಭರದಿಂದ ಸಾಗುತ್ತಿದೆ. ಇದರಿಂದ ನಶೆಯ ಸುಳಿಗೆ ಸಿಕ್ಕ ನಮ್ಮ ಇಂದಿನ ಯುವ ಸಮೂಹ ತಮ್ಮ ಭವಿಷ್ಯವನ್ನು ಕ್ಷಣಿಕ ಸುಖಕ್ಕಾಗಿ ಬಲಿಕೊಡುತ್ತಿದ್ದಾರೆ.

ಇದನ್ನು ಕಟ್ಟಿಹಾಕಲು ಪೋಲಿಸರು ಎಷ್ಟೇ ಶ್ರಮವಹಿಸಿ ಕರ್ತವ್ಯಪಾಲನೆ ಮಾಡಿದರು, ವ್ಯಸನಕ್ಕೊಳಗಾದ ಟೀನೇಜರ್ಸ್ ನ ಪೋಷಕರ ಸಹಾಯವಿಲ್ಲದೇ ಇದನ್ನು ಮಟ್ಟ ಹಾಕುವುದು ಅಸಾದ್ಯ.

ಸುಖ ಮಾಧಕ ವಸ್ತುಗಳಿಂದ ಸಿಗುವುದಿಲ್ಲ ಅದನ್ನು ಬಳಸಿದ ನಂತರ ನಮ್ಮ ಮನಸ್ಸು ಮತ್ತು ಬುದ್ಧಿ ಯಾವುದನ್ನು ಯೋಚಿಸುತ್ತದೆ, ಯಾವುದಕ್ಕೆ ಗಮನಕೊಡುತ್ತದೆ ಎಂಬುದಕ್ಕೆ ಸೀಮಿಥವಾಗಿರುತ್ತದೆ. ನಮ್ಮ ಮನಸ್ಸನ್ನು ಯಾವುದೋ ಮಾಧಕ ವಸ್ತುವಿಗೆ ಅರ್ಪಿಸುವ ಬದಲು ಜೀವನದ ಪ್ರತಿ ಕ್ಷಣದಲ್ಲು, ಪ್ರತೀ ನೋವಲ್ಲು ಖುಷಿಯನ್ನುನ ಮಾತ್ರ ಹುಡುಕಿದರೆ ನಮಗಿಂತ ಕಷ್ಟದಲ್ಲಿರುವ ಪರಿಸ್ಥಿತಿಯವರೊಂದಿಗೆ ಹೋಲಿಸಿಕೊಂಡರೆ ನೀನೆಷ್ಟು ಸುಖಮಃಯಿ ಎಂದು ನಿನಗೇ ಅರ್ಥವಾಗುತ್ತದೆ, ಮಾಧಕ ವಸ್ತುಗಳ ಕ್ಷಣಿಕ ಸುಖಕ್ಕೆ ಬಲಿಯಾಗದೇ ನಮ್ಮ ಜೀವದಲ್ಲೇ ಪ್ರತೀ ಕ್ಷಣವೂ ಇರುವ ಧೀರ್ಘ ಸುಖವನ್ನು ಅರಿತು ಖುಷಿಯಾಗಿರೋಣ.    



ನಶೆಯ ಸುಳಿಗೆ ಸಿಲುಕಿ ಮೆರೆಯದಿರು ಮನವೇ...
ನಶೆಯು ಕಲ್ಪನೇಯೇ ವರೆತೂ, ನೈಜ್ಯ ಜೀವನವಲ್ಲ...
ನಶೆಯ ಮತ್ತಿಗೆ ದಾಸನಾಗದಿರು ಮನವೇ...
ನಶೆಯ ಮೆಟ್ಟಿನಿಲ್ಲು, ನೀ ರಾಜನಾಗಿ ಬಾಳುವೆ...



     Article by   
 _ ಭಕ್ತ ವತ್ಸಲ ಎನ್ ಜೆ

Comments

Popular posts from this blog

ಫ್ಯಾಷನ್ ಭಾವನೆಗಳ ನಗ್ನ ಕನ್ನಡಿ / FASHION IS A NAKED MIRROR OF EMOTIONS

ದೆವ್ವ...? / GHOST...?

ವೃದ್ದಾಪ್ಯ ಸ್ವರ್ಗಕ್ಕೆ ೧,೨,೩ ಮೆಟ್ಟಿಲು / OLD AGE 1,2,3 STEPS FOR HEAVEN